lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

kere yeri (from "mugulu nage") - sonu nigam feat. v. harikrishna lyrics

Loading...

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ

ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

ಯಾರ್ ಬಿತ್ತಿಲ್ಲ ಬೆಳೆದಿಲ್ಲ
ಎದೆ ತುಂಬಾ ಅರಳ್ಯಾವೆ ಕಿಡಿಗೇಡಿ ಕೆಂದಾವರೆ

ನಾವ್ ಕನಸಲ್ಲಿ ಹೆಂಗಪ್ಪ ಆರಾಮಾಗಿರ್ಬೇಕು
ಹಗಲೊತ್ತೆ ಹಿಂಗಾದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ

ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

ಹಿಂಗೆ ಹಿಂದೊಮ್ಮೆ ಎಂದೋ ನಡೆದಂತೆ
ಸುತ್ತ ಮುತ್ತ ಮರೆತು ಕುಂತೆ

ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು
ಮತ್ತೆ ಮತ್ತೆ ನೆನಪಾದಂತೆ

ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ
ಒಂದು ಎರಡು ಮೂರು ಹಣತೆ

ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ
ಅನ್ನೋದನ್ನೇ ನಾನು ಮರೆತೆ

ಎರಡು ರೇಖೆ ಸಾಲೋದಿಲ್ಲ
ಅಂತ್ ಅನಿಸಿ ಎಳಕೊಂಡೆ ಹಣೆ ಮೇಲೆ ಮೂರನೇ ಗೆರೆ

ಈ ಬದುಕಲ್ಲಿ ಯಾವೊನು ಆರಾಮಾಗಿರಲಾರ
ಹಳೆ ನೆನಪೇ ನಿಂತೊದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ

ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

ತುಂಬಾ ಅನಿಸೋದು ನನ್ನಂತ ನನಗೂ
ಪ್ರೀತಿ ಇನ್ನೂ ಗೊತ್ತಾಗಿಲ್ಲ

ಹಂಗಾಗಿ ನಾನು ನನ್ನ ಜೊತೆಗೆನೆ
ಜಾಸ್ತಿ ಏನೂ ಮಾತಾಡಲ್ಲ

ಒಂದು ಸರಿಯಾದ ದುಃಖ ಇರದಿದ್ರೆ
ಕಣ್ಣು ಕೂಡ ತುಂಬೋದಿಲ್ಲ

ತುಂಬ ಪ್ರೀತಿಸುವೆ ತುಂಟತನವನ್ನು
ಗಾಂಭೀರ್ಯವೇ ನನಗಾಗಲ್ಲ

ಯಾವ್ ಕನಸಲ್ಲೂ ನಾನಂತೂ
ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೆ

ನಾ ಅನಿಸಿದ್ದು ಹೇಳಿರುವೆ
ನನ್ನ ಹುಡುಗಿಯರೆ ಕ್ಪಮಿಸಿ ನೀವೆಲ್ಲಾ ಸಿಟ್ಟಾದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

Random Song Lyrics :

Popular

Loading...