lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

ninagaagiye ninagaagiye - chitra & sri ram lyrics

Loading...

ನಿನಗಾಗಿಯೇ ನಿನಗಾಗಿಯೇ
ಕರೆಯೋಲೆಯ ಬರೆದಾಗಿದೇ

ನಿನಗಾಗಿಯೇ ನಿನಗಾಗಿಯೇ
ಕಿರುನೋಟವು ಸರಿದಾಡಿದೇ

ಮರುಳಾಗಿ ನಾನು ಮರೆಮಾಚುತಿರಲು
ತೆರೆಯನ್ನು ತೆರೆದು ಬರಲಾರೆ ಏನು

ಬೆಳಕಲ್ಲಿ ಜೀವ ನಸುನಾಚುತಿರಲು
ಬೆಳದಿಂಗಳನ್ನು ತರಲಾರೆ ಏನು

ನಿನಗಾಗಿಯೇ ನಿನಗಾಗಿಯೇ
ಕರೆಯೋಲೆಯ ಬರೆದಾಗಿದೇ

ನಿನಗಾಗಿಯೇ ನಿನಗಾಗಿಯೇ
ಕಿರುನೋಟವು ಸರಿದಾಡಿದೇ

ಅಲೆಯುವ ಕಣ್ಣಿನ ಕಾಡಿಗೆ ಕರಗಲು
ಕಲ ಕಲ ನಗುತಿದೆ ಈ ಹೂವ ಮಾಲೆ

ಕನಸಿನ ಕಲರವ ಸುತ್ತಲೂ ಕವಿದಿದೆ
ನನ್ನನು ಹುಡುಕುತ ನೀ ಬಂದಮೇಲೆ

ಇರುಳಲ್ಲಿ ಬರೆದ ಮದರಂಗಿಯಲ್ಲಿ
ರಂಗೇರುವಂತೆ ನೆನಪಾಗು ನೀನು

ನನಗಾಗಿ ನಿನ್ನ ಪರದಾಟ ಚಂದ
ತುಸು ದೂರದಲ್ಲಿ ಇರಲಾರೆ ಏನು

ನನಗಾಗಿ ನಿನ್ನ ಪರದಾಟ ಚಂದ
ತುಸು ದೂರದಲ್ಲಿ ಇರಲಾರೆ ಏನು

ನಿನಗಾಗಿಯೇ ನಿನಗಾಗಿಯೇ
ಕರೆಯೋಲೆಯ ಬರೆದಾಗಿದೇ

ನಿನಗಾಗಿಯೇ ನಿನಗಾಗಿಯೇ
ಕಿರುನೋಟವು ಸರಿದಾಡಿದೇ

ಹೃದಯದ ಕನ್ನಡಿ ಒಲವಲಿ ಮಿನುಗಲು
ಅದರಲಿ ನಿನ್ನದೇ ಮೊಗವನ್ನು ನೋಡು

ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ
ಕಾಡದೆ ಸೆಳೆದಿದೆ ಹಿತವಾದ ಹಾಡು

ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ
ನವಿರಾದ ಸುಳಿಯ ಜರಿಯಾಗು ನೀನು

ಹಾಗೆಲ್ಲ ಈಗ ಮಾತಾಡಲಾರೆ
ಏಕಾಂತದಲ್ಲಿ ಸಿಗಲಾರೆ ಏನು

ಹಾಗೆಲ್ಲ ಈಗ ಮಾತಾಡಲಾರೆ
ಏಕಾಂತದಲ್ಲಿ ಸಿಗಲಾರೆ ಏನು

ನಿನಗಾಗಿಯೇ ನಿನಗಾಗಿಯೇ
ಕರೆಯೋಲೆಯ ಬರೆದಾಗಿದೇ

ನಿನಗಾಗಿಯೇ ನಿನಗಾಗಿಯೇ
ಕಿರುನೋಟವು ಸರಿದಾಡಿದೇ

Random Song Lyrics :

Popular

Loading...